ಈ ವಾರ ತೆರೆಗೆ ‘ಭುಜಂಗ’
Posted date: 11 Mon, Jul 2016 – 10:46:26 AM

ಬಹು ನಿರೀಕ್ಷಿತ ಚಿತ್ರ ‘ಭುಜಂಗ’ ನಿರ್ಮಾಪಕ ವರುಣ ಮಹೇಶ್ ಅವರ ಪ್ರಥಮ ಕಾಣಿಕೆ ‘ಭುಜಂಗ’ ಇದೆ ಶುಕ್ರವಾರ ರಾಜ್ಯಾದ್ಯಂತ ತೆರೆ ಕಾಣುತ್ತಿದೆ.

ಜೀವ ಅವರ ನಿರ್ದೇಶನದ ಮೊದಲ ಪ್ರಯತ್ನ ಇದು. ಪ್ರಜ್ವಲ್ ದೇವರಾಜ್ ಹಾಗೂ ಮೇಘನ ರಾಜ್ ಮುಖ್ಯ ತಾರಾಗಣದ ‘ಭುಜಂಗ’ ಚಿತ್ರದಲ್ಲಿ ಐಶ್ವರ್ಯ ಸಿಂದೋಗಿ ಒಂದು ಹಾಡಿಗೆ ಕುಣಿದು ಕುಪ್ಪಳಿಸಿದ್ದಾರೆ. ತಲಕಾಡು, ಮೈಸೂರು, ಬೆಂಗಳೂರಿನಲ್ಲಿ ಚಿತ್ರೀಕರಣ ಮಾಡಿರುವ ‘ಭುಜಂಗ’ ತಾಯಿ-ಮಗನ ಸೆಂಟಿಮೆಂಟ್ ಸಹ ಒಳಗೊಂಡಿರುವ ಚಿತ್ರ.

ಸಂತೋಷ್, ಸಾಧು ಕೋಕಿಲ, ಜೈ ಜಗದೀಶ್, ಬುಲ್ಲೆಟ್ ಪ್ರಕಾಶ್, ತಬಲಾ ನಾಣಿ, ಕಲ್ಯಾಣಿ, ಭಜರಂಗಿ ಚೇತನ್, ಕರಿ ಸುಬ್ಬು ಹಾಗೂ ಇತರರು ಪೋಷಕ ಕಲಾವಿದರಲ್ಲಿ ಇರುವ ಈ ಚಿತ್ರಕ್ಕೆ ಐದು ಹಾಡುಗಳನ್ನು ಪೂರ್ಣಚಂದ್ರ ತೇಜಸ್ವಿ ಅವರು ಸಂಯೋಜನೆ ಮಾಡಿದ್ದಾರೆ. ಗುಂಡಲ್ಪೇಟ್ ಸುರೇಶ್ ಅವರ ಛಾಯಾಗ್ರಹಣ ಇರುವ ಈ ಚಿತ್ರಕ್ಕೆ ಬಿ ಎ ಮಧು ಅವರ ಕಥೆ, ಚಿತ್ರಕಥೆ ಹಾಗೂ ಸಂಭಾಷಣೆ ಇದೆ.

Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed